ಅಪ್ಪು ಅಭಿಮಾನಿಗಳಿಗೆ ಅಶ್ವಿನಿ ಅವರಿಂದ ಗುಡ್ ನ್ಯೂಸ್!

ಅಪ್ಪು ಈಗ ನಮ್ಮ ಮಧ್ಯದಲ್ಲಿಲ್ಲದಿದ್ದರೂ ಅವರ ನೆನಪು, ಪ್ರೀತಿ ಮತ್ತು ಪ್ರೇರಣೆ ಎಂದಿಗೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿದೆ.

ಇದೀಗ ಅಪ್ಪು ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದ್ದಾರೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಅಕ್ಟೋಬರ್ 29ರಂದು, ಪುನೀತ್ ಅವರ ನಾಲ್ಕನೇ ಪುಣ್ಯಸ್ಮರಣೆ ದಿನದಂದು, ಪಿಆರ್ ಕೆ ಆ್ಯಪ್ (PRK App) ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ.

ಅಶ್ವಿನಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು,

“ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗೆ ನಮಸ್ತೆ… ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ಬರ್ತಿದೆ ಪವರ್‌ಫುಲ್ ಟ್ರೈಲರ್! ಇದೇ ಶನಿವಾರ ಬೆಳಿಗ್ಗೆ 11.55ಕ್ಕೆ ಅಪ್ಪುವನ್ನು PRK ಆ್ಯಪ್ ಮೂಲಕ ಕಣ್ತುಂಬಿಕೊಳ್ಳಲು ರೆಡಿಯಾಗಿ!”
ಎಂದು ಬರೆದುಕೊಂಡಿದ್ದಾರೆ.

ಅವರು ಶೇರ್ ಮಾಡಿದ ವಿಡಿಯೋದಲ್ಲಿ,

“ಅಪ್ಪು ಕನಸು ನನಸಾಗುವ ಸಮಯ ಬಂದಿದೆ. ಹೊಸ ಪವರ್‌ಫುಲ್ ಬೆಳಕಿನೊಂದಿಗೆ ಪಿಆರ್ ಕೆ ಹೊಸ ಹೆಜ್ಜೆ ಇಟ್ಟಿದೆ. ಅಭಿಮಾನ, ನಗು ಮತ್ತು ನೆನಪು ಒಂದೇ ವೇದಿಕೆಯಲ್ಲಿ ಸಿಗಲಿದೆ,”
ಎಂದು ಹೇಳಿದ್ದಾರೆ.

ಅಕ್ಟೋಬರ್ 18ರಂದು ಪಿಆರ್ ಕೆ ಆ್ಯಪ್ ಟ್ರೈಲರ್ ಬಿಡುಗಡೆಯಾಗಲಿದ್ದು, ಅಕ್ಟೋಬರ್ 29ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಆ್ಯಪ್ ಅಧಿಕೃತವಾಗಿ ಅನಾವರಣಗೊಳ್ಳಲಿದೆ.

Leave a Reply

Your email address will not be published. Required fields are marked *